Skip to the toolನೇರವಾಗಿ ಪರಿಕರಕ್ಕೆ ಹೋಗಿ

Dr Shashikiran Umakanthಡಾ. ಶಶಿಕಿರಣ್ ಉಮಾಕಾಂತ್

The doctor behind Swasthya Compass ಸ್ವಾಸ್ಥ್ಯ ದಿಕ್ಸೂಚಿಯ ಹಿಂದಿರುವ ವೈದ್ಯರು

His Work in Medicine ವೈದ್ಯಕೀಯ ಪಯಣ

Dr Shashikiran Umakanth is Professor of Medicine and Medical Superintendent at Dr TMA Pai Hospital, Udupi, a unit of MAHE, Manipal. He has been in practice for over twenty years, in internal medicine and in teaching.

ಡಾ. ಶಶಿಕಿರಣ್ ಉಮಾಕಾಂತ್ ಅವರು ಮಾಹೆ (ಮಣಿಪಾಲ) ಸಂಸ್ಥೆಯ ಅಂಗವಾದ ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರು ಹಾಗೂ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೋಧನೆ ಹಾಗೂ ಇಂಟರ್ನಲ್ ಮೆಡಿಸಿನ್ (Internal Medicine) ವಿಭಾಗದಲ್ಲಿ ಅವರಿಗೆ ಎರಡು ದಶಕಗಳಿಗೂ ಮೀರಿದ ಅಪಾರ ಅನುಭವವಿದೆ.

Why Was This Started? ಈ ಹೆಜ್ಜೆಯ ಹಿಂದಿನ ತುಡಿತ

Over his years in practice he watched the distance between doctors and patients grow wider. A great many people were coming to him with trouble that need not have started at all. Nothing had brought it on but a comfortable life. He calls these "convenience-induced diseases". Alongside that, people who trust easily keep losing money and time to quacks.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ, ರೋಗಿಗಳು ಮತ್ತು ವೈದ್ಯರ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿರುವುದನ್ನು ಅವರು ಬಹಳ ಹತ್ತಿರದಿಂದ, ಕೊಂಚ ಆತಂಕದಿಂದಲೇ ಗಮನಿಸಿದ್ದಾರೆ. ಶುರುವಾಗುವ ಅಗತ್ಯವೇ ಇರದಿದ್ದ ತೊಂದರೆಗಳನ್ನು ಹೊತ್ತುಕೊಂಡು ಎಷ್ಟೋ ಜನ ಆಸ್ಪತ್ರೆಯ ಮೆಟ್ಟಿಲೇರುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ನಮ್ಮ ಅತಿಯಾದ ಆರಾಮದಾಯಕ ಬದುಕು. ಇವುಗಳನ್ನು ಅವರು "ಸೌಲಭ್ಯ-ಪ್ರೇರಿತ ಕಾಯಿಲೆಗಳು" (Convenience-induced diseases) ಎಂದು ಕರೆಯುತ್ತಾರೆ. ಇನ್ನೊಂದೆಡೆ, ಸುಲಭವಾಗಿ ನಂಬುವ ಮುಗ್ಧ ಜನರು, ನಕಲಿ ವೈದ್ಯರ ಬಲೆಗೆ ಬಿದ್ದು ತಮ್ಮ ಹಣ ಮತ್ತು ಸಮಯ ಎರಡನ್ನೂ ಕಳೆದುಕೊಳ್ಳುತ್ತಲೇ ಇದ್ದಾರೆ.

Swasthya Compass and his health column "ಕ್ಷ - ಕಿರಣ" (Ksha-Kirana) both came out of that. The aim of the two is the same. It is to put plain, evidence-based health information in front of ordinary readers, in their own language. Then they can ask their own doctor better questions.

ಇದೇ ಆಳವಾದ ಕಾಳಜಿಯಿಂದ 'ಸ್ವಾಸ್ಥ್ಯ ದಿಕ್ಸೂಚಿ' ಹಾಗೂ ಅವರ 'ಕ್ಷ - ಕಿರಣ' ಆರೋಗ್ಯ ಅಂಕಣಗಳು ಹುಟ್ಟಿಕೊಂಡವು. ಇವೆರಡರ ಉದ್ದೇಶವೂ ಒಂದೇ: ವೈಜ್ಞಾನಿಕ ಸಂಶೋಧನೆಯ ಆಧಾರವಿರುವ ನೈಜ ಆರೋಗ್ಯ ಮಾಹಿತಿಯನ್ನು, ಸಾಮಾನ್ಯ ಓದುಗರಿಗೆ ಅವರದೇ ಭಾಷೆಯಲ್ಲಿ, ಸರಳವಾಗಿ ತಲುಪಿಸುವುದು. ಇದರಿಂದ, ಅವರು ತಮ್ಮ ರೋಗದ ಬಗ್ಗೆ ಅರಿತುಕೊಂಡು, ತಮ್ಮ ವೈದ್ಯರ ಬಳಿ ಇನ್ನಷ್ಟು ಸ್ಪಷ್ಟವಾದ, ಒಳನೋಟವುಳ್ಳ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುತ್ತದೆ.

Written and maintained by Dr Shashikiran Umakanth.
The English on this page was last checked: 6 September 2026
ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ.
ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 6 September 2026