When blood glucose falls below 70 mg/dL, it is called low glucose (hypoglycaemia). It is more urgent, and more dangerous right now, than high glucose.
ರಕ್ತದಲ್ಲಿ ಗ್ಲೂಕೋಸ್ ಮಟ್ಟ 70 mg/dL ಗಿಂತ ಕಡಿಮೆಯಾಗುವುದನ್ನು 'ಲೋ ಗ್ಲೂಕೋಸ್' (ಹೈಪೋಗ್ಲೈಸೀಮಿಯಾ) ಎನ್ನುತ್ತಾರೆ. ಇದು ಗ್ಲೂಕೋಸ್ ಹೆಚ್ಚಾಗುವುದಕ್ಕಿಂತಲೂ ಹೆಚ್ಚು ತುರ್ತು ಮತ್ತು ತಕ್ಷಣದ ಅಪಾಯಕಾರಿ ಸ್ಥಿತಿ.
If awake: follow steps 1 to 3 below. If unconscious, or unable to swallow: go straight to the red box. ಪ್ರಜ್ಞೆ ಇದ್ದರೆ: ಕೆಳಗಿನ ಹಂತ 1ರಿಂದ 3ನ್ನು ಪಾಲಿಸಿ. ಪ್ರಜ್ಞೆ ತಪ್ಪಿದ್ದರೆ ಅಥವಾ ನುಂಗಲು ಆಗದಿದ್ದರೆ: ನೇರವಾಗಿ ಕೆಂಪು ಚೌಕಕ್ಕೆ ಹೋಗಿ.
Put nothing in the mouth. Hospital, now. ಬಾಯಿಗೆ ಏನನ್ನೂ ಹಾಕಬೇಡಿ. ತಕ್ಷಣ ಆಸ್ಪತ್ರೆಗೆ.
Do not: if the person has lost consciousness, do not force water, milk or sugar into the mouth. It can go into the lungs and choke them (aspiration). ಮಾಡಬೇಡಿ: ವ್ಯಕ್ತಿಗೆ ಪ್ರಜ್ಞೆ ತಪ್ಪಿದ್ದರೆ ಬಾಯಿಗೆ ನೀರು, ಹಾಲು ಅಥವಾ ಸಕ್ಕರೆ ತುರುಕಬೇಡಿ; ಅದು ಶ್ವಾಸಕೋಶಕ್ಕೆ ಹೋಗಿ ಉಸಿರುಗಟ್ಟುವ ಅಪಾಯವಿದೆ (Aspiration).
Do: as soon as consciousness is lost, lay the person on their left side (the recovery position) and take them at once to the emergency department of the nearest hospital. There, glucose is given into a vein (IV dextrose). ಮಾಡಿ: ಪ್ರಜ್ಞೆ ತಪ್ಪಿದ ತಕ್ಷಣ ವ್ಯಕ್ತಿಯನ್ನು ಎಡಮಗ್ಗುಲಿಗೆ ಮಲಗಿಸಿ (Recovery position), ತಕ್ಷಣ ಹತ್ತಿರದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ಯಿರಿ (ಅಲ್ಲಿ ನರಕ್ಕೆ ಗ್ಲೂಕೋಸ್ / IV Dextrose ನೀಡಲಾಗುತ್ತದೆ).
Glucagon: in a home where someone uses insulin, keep a glucagon injection kit on your doctor's advice, and let the family learn to give it. It is a life-saving injection that can be given without putting anything in the mouth. Even after giving it, take the person to hospital. ಗ್ಲುಕಗಾನ್: ಇನ್‌ಸುಲಿನ್ ಬಳಸುವವರ ಮನೆಯಲ್ಲಿ ವೈದ್ಯರ ಸಲಹೆಯಂತೆ 'ಗ್ಲುಕಗಾನ್' (Glucagon) ಇಂಜೆಕ್ಷನ್ ಕಿಟ್ ಇಟ್ಟುಕೊಳ್ಳಿ, ಮತ್ತು ಅದನ್ನು ಕೊಡುವುದನ್ನು ಮನೆಯವರು ಕಲಿತಿರಲಿ. ಪ್ರಜ್ಞೆ ತಪ್ಪಿದಾಗ ಬಾಯಿಗೆ ಏನೂ ಹಾಕದೆ ಕೊಡಬಹುದಾದ ಜೀವ ರಕ್ಷಕ ಇಂಜೆಕ್ಷನ್ ಇದು; ಕೊಟ್ಟ ಮೇಲೂ ಆಸ್ಪತ್ರೆಗೆ ಕರೆದೊಯ್ಯಿರಿ.
Step 1 ಹಂತ 1
If the person is conscious, give 15 g of simple sugar that dissolves fast, at once. Any one of these:
ಪ್ರಜ್ಞೆ ಇದ್ದರೆ, ತಕ್ಷಣ 15 ಗ್ರಾಂ ವೇಗವಾಗಿ ಕರಗುವ ಸರಳ ಸಕ್ಕರೆ ನೀಡಿ:
Step 2ಹಂತ 2
Give no solid food. Rest completely for 15 minutes.
ಯಾವುದೇ ಘನ ಆಹಾರ ನೀಡದೆ 15 ನಿಮಿಷಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಿರಿ.
Keep this page open. The phone will beep and vibrate when the 15 minutes are over. ಈ ಪುಟವನ್ನು ತೆರೆದೇ ಇಡಿ. 15 ನಿಮಿಷ ಮುಗಿದಾಗ ಫೋನ್ ಸದ್ದು ಮಾಡಿ ಕಂಪಿಸುತ್ತದೆ.
Step 3ಹಂತ 3
After 15 minutes, test the blood on the glucometer:
15 ನಿಮಿಷಗಳ ನಂತರ ಗ್ಲೂಕೋಮೀಟರ್‌ನಲ್ಲಿ ರಕ್ತ ಪರೀಕ್ಷೆ ಮಾಡಿ:
Show this to the doctor or the hospital. It stays on this phone only, and goes when you close the page or start again. ಇದನ್ನು ವೈದ್ಯರಿಗೆ ಅಥವಾ ಆಸ್ಪತ್ರೆಯಲ್ಲಿ ತೋರಿಸಿ. ಇದು ಈ ಫೋನಿನಲ್ಲಿ ಮಾತ್ರ ಇರುತ್ತದೆ; ಪುಟ ಮುಚ್ಚಿದಾಗ ಅಥವಾ ಮತ್ತೆ ಶುರು ಮಾಡಿದಾಗ ಅಳಿಸಿಹೋಗುತ್ತದೆ.
In people who have had diabetes for many years, and in older people, these alarms can go quiet: confusion or loss of consciousness may come without trembling or sweating. They should trust the glucometer more than how they feel. (Chapter 16) ಹಲವು ವರ್ಷಗಳ ಮಧುಮೇಹ ಇರುವವರಲ್ಲಿ ಮತ್ತು ಹಿರಿಯರಲ್ಲಿ ದೇಹದ ಈ ಅಲಾರ್ಮ್ ಕ್ರಮೇಣ ಮೌನವಾಗುತ್ತದೆ; ನಡುಕ, ಬೆವರು ಬರದೆ ನೇರವಾಗಿ ಗೊಂದಲ ಅಥವಾ ಪ್ರಜ್ಞೆ ತಪ್ಪುವುದೇ ಆಗಬಹುದು. ಅಂಥವರು ತಮ್ಮ ಅನುಭವಕ್ಕಿಂತ ಗ್ಲೂಕೋಮೀಟರ್ ಅನ್ನು ಹೆಚ್ಚು ನಂಬಬೇಕು. (ಅಧ್ಯಾಯ 16)
This page is Appendix 2 of the book Madhumeha Manohara by Dr Shashikiran Umakanth, with a timer added. To keep a copy on the fridge, print the book's page: mediscuss.org/books/resources/hypoglycaemia.
ಈ ಪುಟ ಡಾ. ಶಶಿಕಿರಣ್ ಉಮಾಕಾಂತ್ ಅವರ ಮಧುಮೇಹ ಮನೋಹರ ಪುಸ್ತಕದ ಅನುಬಂಧ 2; ಇಲ್ಲಿ ಟೈಮರ್ ಸೇರಿಸಲಾಗಿದೆ ಅಷ್ಟೇ. ಫ್ರಿಜ್ಜಿನ ಮೇಲೆ ಅಂಟಿಸಲು ಪುಸ್ತಕದ ಪುಟವನ್ನು ಮುದ್ರಿಸಿಕೊಳ್ಳಿ: mediscuss.org/books/resources/hypoglycaemia.
Every instruction on the first tab is from Appendix 2 and Chapter 16 of Madhumeha Manohara, written by Dr Shashikiran Umakanth, physician in Udupi. The Kannada is the book's own. This page adds only three things the printed page cannot do: it asks one question at a time, it times the 15 minutes, and it notes what was given and when.
ಮೊದಲ ಟ್ಯಾಬ್‌ನ ಪ್ರತಿಯೊಂದು ಸೂಚನೆಯೂ ಉಡುಪಿಯ ವೈದ್ಯ ಡಾ. ಶಶಿಕಿರಣ್ ಉಮಾಕಾಂತ್ ಬರೆದ ಮಧುಮೇಹ ಮನೋಹರ ಪುಸ್ತಕದ ಅನುಬಂಧ 2 ಮತ್ತು ಅಧ್ಯಾಯ 16ರದ್ದು. ಕನ್ನಡ ವಾಕ್ಯಗಳು ಪುಸ್ತಕದವೇ. ಮುದ್ರಿತ ಪುಟ ಮಾಡಲಾಗದ ಮೂರು ಕೆಲಸಗಳನ್ನು ಮಾತ್ರ ಈ ಪುಟ ಮಾಡುತ್ತದೆ: ಒಂದು ಬಾರಿಗೆ ಒಂದೇ ಪ್ರಶ್ನೆ ಕೇಳುತ್ತದೆ, 15 ನಿಮಿಷ ಎಣಿಸುತ್ತದೆ, ಮತ್ತು ಏನು ಕೊಟ್ಟಿರಿ, ಯಾವಾಗ ಕೊಟ್ಟಿರಿ ಎಂದು ಬರೆದಿಡುತ್ತದೆ.
The brain runs on glucose, and needs a steady supply. When glucose falls below 70 mg/dL, the brain is like a car whose petrol tank has run dry on the highway. What helps in that moment is simple sugar that reaches the blood at once. Fifteen grams is the amount the book gives. The 15-minute wait gives that sugar time to reach the blood before the next reading. (Chapter 16)
ನಮ್ಮ ಮೆದುಳಿಗೆ ಕೆಲಸ ಮಾಡಲು ಗ್ಲೂಕೋಸ್ ಎಂಬ ಪೆಟ್ರೋಲ್ ನಿರಂತರವಾಗಿ ಸರಬರಾಜಾಗುತ್ತಲೇ ಇರಬೇಕು. ಗ್ಲೂಕೋಸ್ ಮಟ್ಟ 70 mg/dL ಗಿಂತ ಕೆಳಗೆ ಕುಸಿಯುವುದು ಹೈವೇ ಮಧ್ಯೆ ಮೆದುಳಿನ ಪೆಟ್ರೋಲ್ ಟ್ಯಾಂಕ್ ಖಾಲಿಯಾದ ಹಾಗೆ. ಆ ಹೊತ್ತಿನಲ್ಲಿ ಬೇಕಾಗಿರುವುದು ತಕ್ಷಣ ರಕ್ತ ಸೇರುವ ಸರಳ ಸಕ್ಕರೆ. ಎಷ್ಟು ಎಂದರೆ, ಪುಸ್ತಕ ಹೇಳುವುದು 15 ಗ್ರಾಂ. ಮುಂದಿನ ಪರೀಕ್ಷೆಗೆ ಮುನ್ನ ಆ ಸಕ್ಕರೆ ರಕ್ತ ಸೇರಲು 15 ನಿಮಿಷದ ಕಾಯುವಿಕೆ. (ಅಧ್ಯಾಯ 16)
Chocolate has a lot of fat. Fat holds food in the stomach longer and delays the sugar reaching the blood. (Chapter 16)
ಚಾಕೊಲೇಟ್‌ನಲ್ಲಿ ಕೊಬ್ಬಿನಂಶ (Fat) ಹೆಚ್ಚಿರುವುದರಿಂದ ಅದು ಹೊಟ್ಟೆ ಖಾಲಿಯಾಗುವುದನ್ನು ತಡೆದು, ಸಕ್ಕರೆ ರಕ್ತಕ್ಕೆ ಸೇರುವುದನ್ನು ವಿಳಂಬಗೊಳಿಸುತ್ತದೆ. (ಅಧ್ಯಾಯ 16)
Voglibose and acarbose slow the gut's breakdown of ordinary sugar, so sugar works too slowly for a low. Glucose powder needs no breakdown, which is why the book asks for it with these two tablets.
ವೊಗ್ಲಿಬೋಸ್ ಮತ್ತು ಅಕಾರ್ಬೋಸ್ ಮಾತ್ರೆಗಳು ಕರುಳಿನಲ್ಲಿ ಸಾಮಾನ್ಯ ಸಕ್ಕರೆ ವಿಭಜನೆಯಾಗುವುದನ್ನು ನಿಧಾನಗೊಳಿಸುತ್ತವೆ; ಹಾಗಾಗಿ ಲೋ ಆದಾಗ ಸಕ್ಕರೆ ತುಂಬಾ ನಿಧಾನವಾಗಿ ಕೆಲಸ ಮಾಡುತ್ತದೆ. ಗ್ಲೂಕೋಸ್ ಪುಡಿ ವಿಭಜನೆಯಾಗಬೇಕಿಲ್ಲ. ಅದಕ್ಕೇ ಈ ಎರಡು ಮಾತ್ರೆ ತೆಗೆದುಕೊಳ್ಳುವವರಿಗೆ ಪುಸ್ತಕ ಗ್ಲೂಕೋಸ್ ಪುಡಿಯನ್ನೇ ಹೇಳುತ್ತದೆ.
Below 70 mg/dL is low, which is the book's definition. So 70 itself is read as "not low", and the page moves on to food. After the third round of sugar, a reading still below 70 sends you to hospital, because the book says to go if glucose has not crossed 70 after two or three repeats. A reading of LO on the meter is read as below 70.
70 mg/dL ಗಿಂತ ಕಡಿಮೆ ಇದ್ದರೆ ಲೋ; ಇದು ಪುಸ್ತಕದ ವ್ಯಾಖ್ಯೆ. ಹಾಗಾಗಿ 70 ಬಂದರೆ ಅದನ್ನು "ಲೋ ಅಲ್ಲ" ಎಂದು ಓದಿ, ಈ ಪುಟ ಊಟದ ಹಂತಕ್ಕೆ ಹೋಗುತ್ತದೆ. ಮೂರನೇ ಬಾರಿ ಸಕ್ಕರೆ ಕೊಟ್ಟ ಮೇಲೂ 70ಕ್ಕಿಂತ ಕಡಿಮೆ ಇದ್ದರೆ ಆಸ್ಪತ್ರೆಗೆ ಹೋಗಲು ಹೇಳುತ್ತದೆ; ಏಕೆಂದರೆ ಎರಡು-ಮೂರು ಬಾರಿ ಪುನರಾವರ್ತಿಸಿದರೂ 70 ದಾಟದಿದ್ದರೆ ಆಸ್ಪತ್ರೆಗೆ ಹೋಗಿ ಎಂದು ಪುಸ್ತಕ ಹೇಳುತ್ತದೆ. ಮೀಟರ್‌ನಲ್ಲಿ LO ಬಂದರೆ ಅದನ್ನು 70ಕ್ಕಿಂತ ಕಡಿಮೆ ಎಂದೇ ಓದುತ್ತದೆ.
It is first aid for an adult, as the book describes it. It does not replace a doctor, and it does not change any medicine. For a child, follow what the child's own doctor has told you. After any low, tell your doctor at the next visit.
ಇದು ಪುಸ್ತಕ ಹೇಳುವಂತೆ ವಯಸ್ಕರಿಗೆ ಪ್ರಥಮ ಚಿಕಿತ್ಸೆ. ಇದು ವೈದ್ಯರ ಬದಲಲ್ಲ, ಮತ್ತು ಯಾವ ಔಷಧವನ್ನೂ ಬದಲಾಯಿಸುವುದಿಲ್ಲ. ಮಕ್ಕಳಿಗಾದರೆ, ಮಗುವಿನ ವೈದ್ಯರು ಹೇಳಿದ್ದನ್ನೇ ಪಾಲಿಸಿ. ಯಾವುದೇ ಲೋ ಆದ ಮೇಲೆ, ಮುಂದಿನ ಭೇಟಿಯಲ್ಲಿ ವೈದ್ಯರಿಗೆ ತಿಳಿಸಿ.
Nothing you type is sent anywhere. The timer and the list of times run on this phone. They are kept only until you close this page, so that a page that reloads by itself does not start again from the beginning. Keep the screen on and the page open while the timer runs; some phones stop a page that is left in the background.
ನೀವು ನಮೂದಿಸುವ ಯಾವುದೂ ಎಲ್ಲಿಗೂ ಹೋಗುವುದಿಲ್ಲ. ಟೈಮರ್ ಮತ್ತು ಸಮಯದ ಪಟ್ಟಿ ಈ ಫೋನಿನಲ್ಲೇ ನಡೆಯುತ್ತವೆ. ನೀವು ಈ ಪುಟವನ್ನು ಮುಚ್ಚುವವರೆಗೆ ಮಾತ್ರ ಅವು ಉಳಿಯುತ್ತವೆ; ಪುಟ ತಾನಾಗಿಯೇ ಮತ್ತೆ ಲೋಡ್ ಆದರೆ ಮೊದಲಿನಿಂದ ಶುರುವಾಗಬಾರದು ಎಂದು. ಟೈಮರ್ ನಡೆಯುವಾಗ ಸ್ಕ್ರೀನ್ ಆರದಂತೆ, ಪುಟ ತೆರೆದೇ ಇರುವಂತೆ ನೋಡಿಕೊಳ್ಳಿ; ಕೆಲವು ಫೋನ್‌ಗಳು ಹಿನ್ನೆಲೆಗೆ ಹೋದ ಪುಟವನ್ನು ನಿಲ್ಲಿಸುತ್ತವೆ.