Emergency Medical ID Cardತುರ್ತು ವೈದ್ಯಕೀಯ ಗುರುತಿನ ಚೀಟಿ
Fill it in once. Print it wallet size, or keep it as your phone's lock-screen picture, so a stranger can help if you are found unwell. From Madhumeha Manohara, Appendix 5.ಒಮ್ಮೆ ತುಂಬಿ. ಪರ್ಸ್ ಅಳತೆಗೆ ಮುದ್ರಿಸಿ, ಅಥವಾ ಫೋನಿನ ಲಾಕ್ ಸ್ಕ್ರೀನ್ ಚಿತ್ರವಾಗಿ ಇಟ್ಟುಕೊಳ್ಳಿ; ನೀವು ಅಸ್ವಸ್ಥರಾಗಿ ಸಿಕ್ಕರೆ ಅಪರಿಚಿತರೂ ನೆರವಾಗಬಹುದು. ಮಧುಮೇಹ ಮನೋಹರ ಪುಸ್ತಕದ ಅನುಬಂಧ 5ರಿಂದ.
What you type stays on this phone. It is not sent anywhere, and this site cannot see it. It is gone when you close the page, unless you tick "Keep on this phone" below.ನೀವು ಟೈಪ್ ಮಾಡಿದ್ದು ಈ ಫೋನಿನಲ್ಲೇ ಇರುತ್ತದೆ. ಅದು ಎಲ್ಲಿಗೂ ಹೋಗುವುದಿಲ್ಲ, ಈ ತಾಣಕ್ಕೆ ಕಾಣುವುದೂ ಇಲ್ಲ. ಕೆಳಗಿನ "ಈ ಫೋನಿನಲ್ಲೇ ಇಟ್ಟುಕೊಳ್ಳಿ" ಟಿಕ್ ಮಾಡದಿದ್ದರೆ, ಪುಟ ಮುಚ್ಚಿದಾಗ ಅದು ಅಳಿಸಿಹೋಗುತ್ತದೆ.
What goes on the cardಚೀಟಿಯಲ್ಲಿ ಏನಿರಬೇಕು
Leave any box empty and the card gets a line there, to write on by hand.ಯಾವುದಾದರೂ ಚೌಕವನ್ನು ಖಾಲಿ ಬಿಟ್ಟರೆ, ಚೀಟಿಯಲ್ಲಿ ಅದರ ಜಾಗದಲ್ಲಿ ಕೈಯಿಂದ ಬರೆಯಲು ಒಂದು ಗೆರೆ ಬರುತ್ತದೆ.
Treatmentಚಿಕಿತ್ಸೆ
Copy the names and doses from your prescription, as your doctor wrote them.ನಿಮ್ಮ ಪ್ರಿಸ್ಕ್ರಿಪ್ಷನ್ ನೋಡಿ, ವೈದ್ಯರು ಬರೆದಂತೆಯೇ ಔಷಧಿಗಳ ಹೆಸರು ಮತ್ತು ಡೋಸ್ ಬರೆಯಿರಿ.
Only on this phone. Remove it any time with Reset, or with "Forget all of it" on your account page. On a phone the whole family uses, leave this unticked.ಈ ಫೋನಿನಲ್ಲಿ ಮಾತ್ರ. ಯಾವಾಗ ಬೇಕಾದರೂ "ಎಲ್ಲ ಅಳಿಸಿ" ಬಟನ್ನಿಂದ, ಅಥವಾ ಖಾತೆ ಪುಟದ "ಎಲ್ಲವನ್ನೂ ಅಳಿಸಿಹಾಕಿ" ಬಟನ್ನಿಂದ ತೆಗೆಯಬಹುದು. ಮನೆಯವರೆಲ್ಲ ಬಳಸುವ ಫೋನಿನಲ್ಲಿ ಇದನ್ನು ಟಿಕ್ ಮಾಡಬೇಡಿ.
Where the card comes fromಈ ಚೀಟಿ ಎಲ್ಲಿಂದ ಬಂತು
The lines on the card, and the note to the public on its back, are the card printed in Appendix 5 of Madhumeha Manohara, by Dr Shashikiran Umakanth. The card is always in both Kannada and English, whichever language you read this page in, because the person who finds you may read either.
ಚೀಟಿಯ ಸಾಲುಗಳು ಮತ್ತು ಹಿಂಬದಿಯ ಸಾರ್ವಜನಿಕರಿಗೆ ಸೂಚನೆ, ಡಾ. ಶಶಿಕಿರಣ್ ಉಮಾಕಾಂತ್ ಅವರ ಮಧುಮೇಹ ಮನೋಹರ ಪುಸ್ತಕದ ಅನುಬಂಧ 5ರಲ್ಲಿ ಮುದ್ರಿಸಿರುವ ಚೀಟಿಯದ್ದೇ. ನೀವು ಈ ಪುಟವನ್ನು ಯಾವ ಭಾಷೆಯಲ್ಲಿ ಓದಿದರೂ ಚೀಟಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇರುತ್ತದೆ; ನಿಮ್ಮನ್ನು ಕಂಡವರು ಯಾವ ಭಾಷೆ ಓದುವವರೋ ಗೊತ್ತಿಲ್ಲ.
The printed cardಮುದ್ರಿಸಿದ ಚೀಟಿ
It prints on an ordinary A4 sheet as two cards, each the size of a bank card when folded. Print at 100 per cent, not "fit to page". Cut along the dashed line and fold along the dotted line in the middle. Keep one in your wallet and one in your bag. When a medicine changes, make the card again.
ಇದು ಸಾಮಾನ್ಯ A4 ಹಾಳೆಯಲ್ಲಿ ಎರಡು ಚೀಟಿಗಳಾಗಿ ಮುದ್ರಣವಾಗುತ್ತದೆ; ಮಡಿಸಿದಾಗ ಪ್ರತಿಯೊಂದೂ ಬ್ಯಾಂಕ್ ಕಾರ್ಡಿನ ಅಳತೆಯಷ್ಟು ಇರುತ್ತದೆ. 100% ಅಳತೆಯಲ್ಲೇ ಮುದ್ರಿಸಿ, "fit to page" ಬೇಡ. ತುಂಡು ತುಂಡಾದ ಗೆರೆಯ ಮೇಲೆ ಕತ್ತರಿಸಿ, ನಡುವಿನ ಚುಕ್ಕಿ ಗೆರೆಯ ಮೇಲೆ ಮಡಿಸಿ. ಒಂದನ್ನು ಪರ್ಸಿನಲ್ಲಿ, ಇನ್ನೊಂದನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ಔಷಧಿ ಬದಲಾದಾಗ ಚೀಟಿಯನ್ನು ಮತ್ತೆ ಮಾಡಿ.
The lock-screen pictureಲಾಕ್ ಸ್ಕ್ರೀನ್ ಚಿತ್ರ
A phone is often the one thing a person found unwell has on them, and its lock screen can be read without unlocking it. The picture leaves the top of the screen dark and empty, where the clock sits. It carries no QR code.
ಅಸ್ವಸ್ಥರಾಗಿ ಸಿಕ್ಕವರ ಬಳಿ ಹಲವು ಬಾರಿ ಇರುವುದು ಅವರ ಫೋನ್ ಒಂದೇ. ಅದರ ಲಾಕ್ ಸ್ಕ್ರೀನ್ ಅನ್ನು ಅನ್ಲಾಕ್ ಮಾಡದೆಯೇ ಓದಬಹುದು. ಗಡಿಯಾರ ಇರುವ ಸ್ಕ್ರೀನಿನ ಮೇಲ್ಭಾಗವನ್ನು ಈ ಚಿತ್ರ ಕಪ್ಪಾಗಿ, ಖಾಲಿಯಾಗಿ ಬಿಡುತ್ತದೆ. ಇದರಲ್ಲಿ QR ಕೋಡ್ ಇಲ್ಲ.
Android: open the picture in Gallery or Photos, choose "Set as wallpaper", then "Lock screen".ಆಂಡ್ರಾಯ್ಡ್: ಚಿತ್ರವನ್ನು Gallery ಅಥವಾ Photos ನಲ್ಲಿ ತೆರೆದು, "Set as wallpaper" ಆರಿಸಿ, ನಂತರ "Lock screen".
iPhone: press and hold the picture, choose "Save to Photos". Open it in Photos, tap Share, then "Use as Wallpaper".ಐಫೋನ್: ಚಿತ್ರವನ್ನು ಒತ್ತಿ ಹಿಡಿದು "Save to Photos" ಆರಿಸಿ. Photos ನಲ್ಲಿ ತೆರೆದು Share ಒತ್ತಿ, ನಂತರ "Use as Wallpaper".
What happens to what you typeನೀವು ಟೈಪ್ ಮಾಡಿದ್ದು ಏನಾಗುತ್ತದೆ
The card and the picture are made inside your browser, on this phone. Nothing goes to this site's server, or anywhere else. If you tick "Keep on this phone", your entries are stored on this phone only, until you press Reset or "Forget all of it". Without the tick, nothing is kept after you close the page.
ಚೀಟಿ ಮತ್ತು ಚಿತ್ರ ಈ ಫೋನಿನ ಬ್ರೌಸರಿನಲ್ಲೇ ತಯಾರಾಗುತ್ತವೆ. ಯಾವುದೂ ಈ ತಾಣದ ಸರ್ವರಿಗಾಗಲೀ ಬೇರೆಲ್ಲಿಗಾಗಲೀ ಹೋಗುವುದಿಲ್ಲ. "ಈ ಫೋನಿನಲ್ಲೇ ಇಟ್ಟುಕೊಳ್ಳಿ" ಟಿಕ್ ಮಾಡಿದರೆ, ನೀವು "ಎಲ್ಲ ಅಳಿಸಿ" ಅಥವಾ "ಎಲ್ಲವನ್ನೂ ಅಳಿಸಿಹಾಕಿ" ಒತ್ತುವವರೆಗೆ ನಿಮ್ಮ ವಿವರಗಳು ಈ ಫೋನಿನಲ್ಲಿ ಮಾತ್ರ ಉಳಿಯುತ್ತವೆ. ಟಿಕ್ ಮಾಡದಿದ್ದರೆ, ಪುಟ ಮುಚ್ಚಿದ ಮೇಲೆ ಏನೂ ಉಳಿಯುವುದಿಲ್ಲ.
Abbreviations: ID (identity) · A4 (the ordinary office paper size, 210 by 297 millimetres) · QR (quick response, a square code read by a phone camera)ಪದಗಳ ಅರ್ಥ: ID (ಗುರುತು) · A4 (ಕಚೇರಿಯ ಸಾಮಾನ್ಯ ಕಾಗದದ ಅಳತೆ, 210 x 297 ಮಿಲಿಮೀಟರ್) · QR (ಕ್ವಿಕ್ ರೆಸ್ಪಾನ್ಸ್, ಫೋನಿನ ಕ್ಯಾಮೆರಾ ಓದುವ ಚೌಕಾಕಾರದ ಕೋಡ್)
Written and maintained by Dr Shashikiran Umakanth. The English on this page was last checked: 20 October 2026ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ. ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 31 October 2026
Take the printed sheet to your doctor. Nothing is uploaded: the sheet is made on this device.ಮುದ್ರಿಸಿದ ಈ ಹಾಳೆಯನ್ನು ನಿಮ್ಮ ವೈದ್ಯರ ಬಳಿಗೆ ಒಯ್ಯಿರಿ. ನಿಮ್ಮ ಯಾವ ಮಾಹಿತಿಯೂ ಇಂಟರ್ನೆಟ್ಗೆ ಹೋಗುವುದಿಲ್ಲ: ಈ ಹಾಳೆಯು ನಿಮ್ಮ ಸಾಧನದಲ್ಲೇ ಸಿದ್ಧವಾಗುತ್ತದೆ.
This one sends the result to your account, where only you can see it. Everything you entered is encrypted before it is stored. The note is not: it is what the list is built from, so keep it short.ಇದು ಈ ಫಲಿತಾಂಶವನ್ನು ನಿಮ್ಮ ಖಾತೆಗೆ ಕಳುಹಿಸುತ್ತದೆ; ಅಲ್ಲಿ ಅದನ್ನು ನೀವು ಮಾತ್ರ ನೋಡಬಹುದು. ನೀವು ನಮೂದಿಸಿದ ಎಲ್ಲ ವಿವರಗಳನ್ನೂ ಸಂಗ್ರಹಿಸುವ ಮುನ್ನ ಸುರಕ್ಷಿತವಾಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಟಿಪ್ಪಣಿಯನ್ನು ಮಾತ್ರ ಹಾಗೆ ಮಾಡುವುದಿಲ್ಲ, ಏಕೆಂದರೆ ಪಟ್ಟಿಯಲ್ಲಿ ಕಾಣಿಸುವುದು ಅದೇ. ಆದ್ದರಿಂದ ಅದನ್ನು ಸಾಧ್ಯವಾದಷ್ಟು ಚಿಕ್ಕದಾಗಿ ಇಡಿ.