Skip to the toolನೇರವಾಗಿ ಪರಿಕರಕ್ಕೆ ಹೋಗಿ
Goes with the book Madhumeha Manoharaಮಧುಮೇಹ ಮನೋಹರ ಪುಸ್ತಕದ ಜೊತೆಗಿನ ಪರಿಕರ 

My Diabetes Check-Up Calendarನನ್ನ ಮಧುಮೇಹ ತಪಾಸಣಾ ಕ್ಯಾಲೆಂಡರ್

The book's list of regular checks. Type the date of each one, and the page tells you what is due, what is overdue, and puts the next dates in your phone's calendar. From Madhumeha Manohara, Appendix 1. ಪುಸ್ತಕದಲ್ಲಿರುವ ನಿಯಮಿತ ತಪಾಸಣೆಗಳ ಪಟ್ಟಿ. ಪ್ರತಿಯೊಂದರ ದಿನಾಂಕ ಹಾಕಿ; ಯಾವುದು ಮಾಡಿಸಬೇಕು, ಯಾವುದು ಬಾಕಿ ಇದೆ ಎಂದು ಈ ಪುಟ ಹೇಳುತ್ತದೆ, ಮುಂದಿನ ದಿನಾಂಕಗಳನ್ನು ಫೋನಿನ ಕ್ಯಾಲೆಂಡರ್‌ಗೆ ಸೇರಿಸುತ್ತದೆ. ಮಧುಮೇಹ ಮನೋಹರ ಪುಸ್ತಕದ ಅನುಬಂಧ 1ರಿಂದ.

Diabetes is not only a rise and fall of blood glucose. It affects the body's main blood vessels and nerves. To prevent problems at their earliest stage, have these checks done on this schedule. For costs and government schemes, see Appendix 6.

ಮಧುಮೇಹ ಕೇವಲ ರಕ್ತದಲ್ಲಿ ಗ್ಲೂಕೋಸ್ ಮಟ್ಟದ ಏರಿಳಿತವಲ್ಲ; ಅದು ದೇಹದ ಮುಖ್ಯ ರಕ್ತನಾಳಗಳು ಮತ್ತು ನರಗಳ ಮೇಲೂ ಪರಿಣಾಮ ಬೀರುತ್ತದೆ. ಯಾವುದೇ ತೊಂದರೆಗಳನ್ನು ಆರಂಭದ ಹಂತದಲ್ಲೇ ತಡೆಯಲು, ಈ ವೇಳಾಪಟ್ಟಿಯಂತೆ ತಪಾಸಣೆ ಮಾಡಿಸಿಕೊಳ್ಳಿ. ಖರ್ಚು ಮತ್ತು ಸರ್ಕಾರಿ ಸೌಲಭ್ಯಗಳ ವಿವರಗಳಿಗೆ ಅನುಬಂಧ 6 ನೋಡಿ.

What you type stays on this phone. Nothing is sent anywhere. To have the page remember your dates next time, tick "Keep on this phone" at the end of the list. ನೀವು ಟೈಪ್ ಮಾಡುವುದು ಈ ಫೋನಿನಲ್ಲೇ ಇರುತ್ತದೆ. ಯಾವುದೂ ಎಲ್ಲಿಗೂ ಹೋಗುವುದಿಲ್ಲ. ಮುಂದಿನ ಬಾರಿಯೂ ನಿಮ್ಮ ದಿನಾಂಕಗಳು ಉಳಿಯಬೇಕೆಂದರೆ, ಪಟ್ಟಿಯ ಕೊನೆಯಲ್ಲಿರುವ "ಈ ಫೋನಿನಲ್ಲೇ ಇಟ್ಟುಕೊಳ್ಳಿ" ಆಯ್ಕೆಯನ್ನು ಟಿಕ್ ಮಾಡಿ.

The checks, and when you last had each ತಪಾಸಣೆಗಳು, ಮತ್ತು ಕೊನೆಯ ಬಾರಿ ಯಾವಾಗ ಮಾಡಿಸಿದಿರಿ

HbA1c (the three-month average)HbA1c (ಮೂರು ತಿಂಗಳ ಸರಾಸರಿ)

How often: Every 3 months (every 6 months if control is steady)ಎಷ್ಟು ದಿನಗಳಿಗೊಮ್ಮೆ: 3 ತಿಂಗಳಿಗೊಮ್ಮೆ (ನಿಯಂತ್ರಣ ಸ್ಥಿರವಿದ್ದರೆ 6 ತಿಂಗಳಿಗೊಮ್ಮೆ)

The book's target: Below 7.0% (depends on health: older people 7.5 to 8.0%, frail people up to 8.5%; the doctor decides)ಪುಸ್ತಕದ ಗುರಿ: < 7.0% (ಆರೋಗ್ಯದ ಸ್ಥಿತಿಯಂತೆ: ಹಿರಿಯರಿಗೆ 7.5ರಿಂದ 8.0%, ದುರ್ಬಲರಿಗೆ 8.5% ವರೆಗೆ; ವೈದ್ಯರ ನಿರ್ಧಾರ)

Blood pressureರಕ್ತದೊತ್ತಡ (BP)

How often: At every doctor visitಎಷ್ಟು ದಿನಗಳಿಗೊಮ್ಮೆ: ವೈದ್ಯರನ್ನು ಭೇಟಿಯಾದಾಗಲೆಲ್ಲ

The book's target: Below 130/80 mmHgಪುಸ್ತಕದ ಗುರಿ: < 130/80 mmHg

Weight and waistತೂಕ ಮತ್ತು ಸೊಂಟದ ಸುತ್ತಳತೆ

How often: Once a monthಎಷ್ಟು ದಿನಗಳಿಗೊಮ್ಮೆ: ತಿಂಗಳಿಗೊಮ್ಮೆ

The book's target: Waist: men below 90 cm, women below 80 cmಪುಸ್ತಕದ ಗುರಿ: ಸೊಂಟದ ಸುತ್ತಳತೆ: ಪುರುಷರಿಗೆ < 90 cm, ಮಹಿಳೆಯರಿಗೆ < 80 cm

Body mass index (BMI)ಬಾಡಿ ಮಾಸ್ ಇಂಡೆಕ್ಸ್ (BMI)

How often: Once a monthಎಷ್ಟು ದಿನಗಳಿಗೊಮ್ಮೆ: ತಿಂಗಳಿಗೊಮ್ಮೆ

The book's target: 18.5 to 22.9 kg/m² (the Asian Indian limit)ಪುಸ್ತಕದ ಗುರಿ: 18.5-22.9 kg/m² (ಏಷ್ಯನ್ ಭಾರತೀಯರ ಮಿತಿ)

Checking your own feetಪಾದಗಳನ್ನು ನೀವೇ ಪರೀಕ್ಷಿಸುವುದು

How often: Every nightಎಷ್ಟು ದಿನಗಳಿಗೊಮ್ಮೆ: ಪ್ರತಿದಿನ ರಾತ್ರಿ

The book's target: No wound, blister or crackಪುಸ್ತಕದ ಗುರಿ: ಗಾಯ, ಗುಳ್ಳೆ, ಬಿರುಕು ಇರಬಾರದು

Foot nerve check by the doctorವೈದ್ಯರಿಂದ ಪಾದಗಳ ನರ ತಪಾಸಣೆ

How often: Once a yearಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ

The book's target: Monofilament / tuning fork normalಪುಸ್ತಕದ ಗುರಿ: Monofilament / Tuning Fork ಪರೀಕ್ಷೆ ನಾರ್ಮಲ್ ಆಗಿರಬೇಕು

Vitamin B12 levelವಿಟಮಿನ್ B12 ಮಟ್ಟ

How often: Once a yearಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ

The book's target: Above 300 pg/mLಪುಸ್ತಕದ ಗುರಿ: > 300 pg/mL

Retina check of the eye (fundus)ಕಣ್ಣಿನ ರೆಟಿನಾ ತಪಾಸಣೆ (Fundus)

How often: Once a year (by an eye specialist)ಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ (ಕಣ್ಣಿನ ತಜ್ಞರಿಂದ)

The book's target: No retinopathyಪುಸ್ತಕದ ಗುರಿ: Retinopathy ಇರಬಾರದು

Micro-albumin in the urine (UACR)ಮೂತ್ರದಲ್ಲಿ ಮೈಕ್ರೋ-ಅಲ್ಬುಮಿನ್ (UACR)

How often: Once a yearಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ

The book's target: Below 30 mg/gಪುಸ್ತಕದ ಗುರಿ: < 30 mg/g

Serum creatinine and eGFRಸೀರಂ ಕ್ರಿಯೇಟಿನೈನ್ & eGFR

How often: Once a yearಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ

The book's target: eGFR above 60 mL/min/1.73 m²; creatinine: men 0.7 to 1.2, women 0.6 to 1.1 mg/dLಪುಸ್ತಕದ ಗುರಿ: eGFR > 60 mL/min/1.73 m²; ಕ್ರಿಯೇಟಿನೈನ್: ಪುರುಷರಿಗೆ 0.7-1.2, ಮಹಿಳೆಯರಿಗೆ 0.6-1.1 mg/dL

Lipid profile (cholesterol)ಲಿಪಿಡ್ ಪ್ರೊಫೈಲ್ (ಕೊಲೆಸ್ಟ್ರಾಲ್)

How often: Once a yearಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ

The book's target: LDL below 70 mg/dL (below 55 after a heart attack); the doctor decidesಪುಸ್ತಕದ ಗುರಿ: LDL < 70 mg/dL (ಹೃದಯಾಘಾತ ಆಗಿದ್ದವರಿಗೆ < 55), ವೈದ್ಯರ ನಿರ್ಧಾರ

ECGECG

How often: Once a year (on the doctor's advice); at once with chest pain or breathlessnessಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ (ವೈದ್ಯರ ಸಲಹೆಯಂತೆ); ಎದೆನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ತಕ್ಷಣ

The book's target: No sign of an old heart attackಪುಸ್ತಕದ ಗುರಿ: ಹಳೆಯ ಹೃದಯಾಘಾತದ ಗುರುತು ಇರಬಾರದು

Teeth and gums checkಹಲ್ಲು ಮತ್ತು ಒಸಡುಗಳ ತಪಾಸಣೆ

How often: Every 6 monthsಎಷ್ಟು ದಿನಗಳಿಗೊಮ್ಮೆ: ಪ್ರತಿ 6 ತಿಂಗಳಿಗೊಮ್ಮೆ

The book's target: No gum infectionಪುಸ್ತಕದ ಗುರಿ: ಒಸಡಿನ ಸೋಂಕು ಇರಬಾರದು

Flu vaccineಫ್ಲೂ ಲಸಿಕೆ

How often: Once a year (before the monsoon)ಎಷ್ಟು ದಿನಗಳಿಗೊಮ್ಮೆ: ವರ್ಷಕ್ಕೊಮ್ಮೆ (ಮಳೆಗಾಲಕ್ಕೆ ಮುನ್ನ)

The book's target: Note the date you had itಪುಸ್ತಕದ ಗುರಿ: ಲಸಿಕೆ ಹಾಕಿಸಿಕೊಂಡ ದಿನಾಂಕ ಬರೆದಿಡಿ

Pneumococcal vaccineನ್ಯುಮೋಕೊಕಲ್ ಲಸಿಕೆ

How often: On the doctor's scheduleಎಷ್ಟು ದಿನಗಳಿಗೊಮ್ಮೆ: ವೈದ್ಯರ ವೇಳಾಪಟ್ಟಿಯಂತೆ

The book's target: Note the date you had itಪುಸ್ತಕದ ಗುರಿ: ಲಸಿಕೆ ಹಾಕಿಸಿಕೊಂಡ ದಿನಾಂಕ ಬರೆದಿಡಿ

Only on this phone, until you press Reset or "Forget all of it" on your account page. A phone can lose what a site keeps, so save a backup file now and then (below the calendar). ಈ ಫೋನಿನಲ್ಲಿ ಮಾತ್ರ, ನೀವು "ಎಲ್ಲ ಅಳಿಸಿ" ಅಥವಾ ಖಾತೆ ಪುಟದಲ್ಲಿ "ಎಲ್ಲವನ್ನೂ ಅಳಿಸಿಹಾಕಿ" ಒತ್ತುವವರೆಗೆ. ತಾಣ ಇಟ್ಟದ್ದನ್ನು ಫೋನ್ ಕಳೆದುಕೊಳ್ಳಬಹುದು; ಹಾಗಾಗಿ ಆಗಾಗ ಬ್ಯಾಕಪ್ ಫೈಲ್ ಉಳಿಸಿ (ಕ್ಯಾಲೆಂಡರ್‌ನ ಕೆಳಗೆ).

Backupಬ್ಯಾಕಪ್

Save your dates and results as a small file, to keep or to move to a new phone. Load it here to bring them back.

ನಿಮ್ಮ ದಿನಾಂಕ ಮತ್ತು ಫಲಿತಾಂಶಗಳನ್ನು ಒಂದು ಸಣ್ಣ ಫೈಲ್ ಆಗಿ ಉಳಿಸಿ. ಅದನ್ನು ಇಟ್ಟುಕೊಳ್ಳಬಹುದು, ಅಥವಾ ಹೊಸ ಫೋನಿಗೆ ಹಾಕಿಕೊಳ್ಳಬಹುದು. ಆ ಫೈಲನ್ನು ಇಲ್ಲಿ ಲೋಡ್ ಮಾಡಿದರೆ ಅವೆಲ್ಲ ಮರಳಿ ಬರುತ್ತವೆ.

Where the list comes fromಈ ಪಟ್ಟಿ ಎಲ್ಲಿಂದ ಬಂತು

Every check, how often, and every target is the table in Appendix 1 of Madhumeha Manohara, by Dr Shashikiran Umakanth. The page adds only arithmetic: the date you type, plus the book's interval, gives the next date. The vaccines row of the book is shown as two rows here, because the flu vaccine is yearly and the pneumococcal vaccine follows the doctor's schedule.

ಪ್ರತಿಯೊಂದು ತಪಾಸಣೆ, ಅದನ್ನು ಎಷ್ಟು ದಿನಗಳಿಗೊಮ್ಮೆ ಮಾಡಿಸಬೇಕು, ಮತ್ತು ಪ್ರತಿಯೊಂದು ಗುರಿ: ಇವೆಲ್ಲ ಡಾ. ಶಶಿಕಿರಣ್ ಉಮಾಕಾಂತ್ ಅವರ ಮಧುಮೇಹ ಮನೋಹರ ಪುಸ್ತಕದ ಅನುಬಂಧ 1ರ ಪಟ್ಟಿಯಲ್ಲಿರುವಂತೆಯೇ ಇವೆ. ಈ ಪುಟ ಇದಕ್ಕೆ ಸೇರಿಸುವುದು ಲೆಕ್ಕ ಮಾತ್ರ: ನೀವು ಟೈಪ್ ಮಾಡುವ ದಿನಾಂಕಕ್ಕೆ ಪುಸ್ತಕದ ಅವಧಿಯನ್ನು ಕೂಡಿಸಿದರೆ ಮುಂದಿನ ದಿನಾಂಕ ಸಿಗುತ್ತದೆ. ಪುಸ್ತಕದಲ್ಲಿ ಲಸಿಕೆಗಳು ಒಂದೇ ಸಾಲಿನಲ್ಲಿವೆ; ಇಲ್ಲಿ ಅವನ್ನು ಎರಡು ಸಾಲುಗಳಲ್ಲಿ ತೋರಿಸಿದೆ, ಏಕೆಂದರೆ ಫ್ಲೂ ಲಸಿಕೆ ವರ್ಷಕ್ಕೊಮ್ಮೆ, ನ್ಯುಮೋಕೊಕಲ್ ಲಸಿಕೆ ವೈದ್ಯರ ವೇಳಾಪಟ್ಟಿಯಂತೆ.

Why the page does not colour your resultsನಿಮ್ಮ ಫಲಿತಾಂಶಗಳಿಗೆ ಈ ಪುಟ ಬಣ್ಣ ಹಾಕದಿರುವುದು ಏಕೆ

Your result is shown beside the book's target, and that is all. Many of the book's targets say "the doctor decides", because the right target depends on your age, your health and your medicines. A page that marked your number as good or bad would be deciding what only your doctor can. What the page does mark is time: a check that is overdue, and one that is due within the next 30 days.

ನಿಮ್ಮ ಫಲಿತಾಂಶ ಪುಸ್ತಕದ ಗುರಿಯ ಪಕ್ಕದಲ್ಲಿ ಕಾಣಿಸುತ್ತದೆ, ಅಷ್ಟೇ. ಪುಸ್ತಕದ ಹಲವು ಗುರಿಗಳಲ್ಲಿ "ವೈದ್ಯರ ನಿರ್ಧಾರ" ಎಂದಿದೆ; ಏಕೆಂದರೆ ಸರಿಯಾದ ಗುರಿ ನಿಮ್ಮ ವಯಸ್ಸು, ಆರೋಗ್ಯ ಮತ್ತು ಔಷಧಗಳನ್ನು ಅವಲಂಬಿಸಿರುತ್ತದೆ. ಈ ಪುಟ ನಿಮ್ಮ ಸಂಖ್ಯೆಯನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ಗುರುತಿಸಿದರೆ, ನಿಮ್ಮ ವೈದ್ಯರು ಮಾತ್ರ ಮಾಡಬಹುದಾದ ನಿರ್ಧಾರವನ್ನು ಅದೇ ಮಾಡಿದಂತಾಗುತ್ತದೆ. ಈ ಪುಟ ಗುರುತಿಸುವುದು ಸಮಯವನ್ನು ಮಾತ್ರ: ಬಾಕಿ ಇರುವ ತಪಾಸಣೆ, ಮತ್ತು ಮುಂದಿನ 30 ದಿನಗಳಲ್ಲಿ ಮಾಡಿಸಬೇಕಾದ ತಪಾಸಣೆ.

How the dates are worked outಈ ಪುಟ ದಿನಾಂಕಗಳನ್ನು ಹೇಗೆ ಲೆಕ್ಕ ಹಾಕುತ್ತದೆ

By calendar months, the way a diary is kept: three months after 31 January is 30 April. Blood pressure, the nightly foot check and the pneumococcal vaccine have no interval in months, so no due date is made up for them. A check whose date is more than a year or two old is shown as overdue, never as missing.

ಡೈರಿಯಲ್ಲಿ ಬರೆಯುವಂತೆಯೇ, ಕ್ಯಾಲೆಂಡರ್ ತಿಂಗಳುಗಳ ಲೆಕ್ಕದಲ್ಲಿ: 31 ಜನವರಿಯಿಂದ ಮೂರು ತಿಂಗಳು ಎಂದರೆ 30 ಏಪ್ರಿಲ್. ರಕ್ತದೊತ್ತಡ, ರಾತ್ರಿಯ ಪಾದ ಪರೀಕ್ಷೆ ಮತ್ತು ನ್ಯುಮೋಕೊಕಲ್ ಲಸಿಕೆಗೆ ತಿಂಗಳುಗಳ ಅವಧಿ ಇಲ್ಲ; ಹಾಗಾಗಿ ಈ ಪುಟ ಅವಕ್ಕೆ ಯಾವ ದಿನಾಂಕವನ್ನೂ ಕಲ್ಪಿಸಿ ಹೇಳುವುದಿಲ್ಲ. ಒಂದು ತಪಾಸಣೆಯ ದಿನಾಂಕ ಒಂದೆರಡು ವರ್ಷಕ್ಕಿಂತ ಹಳೆಯದಾಗಿದ್ದರೆ, ಈ ಪುಟ ಅದನ್ನು ಬಾಕಿ ಎಂದೇ ತೋರಿಸುತ್ತದೆ; ದಿನಾಂಕ ಹಾಕಿಲ್ಲ ಎಂದು ಎಂದಿಗೂ ತೋರಿಸುವುದಿಲ್ಲ.

What happens to what you typeನೀವು ಟೈಪ್ ಮಾಡಿದ್ದು ಏನಾಗುತ್ತದೆ

Nothing goes to this site's server. If you tick "Keep on this phone", your dates and results are stored on this phone only, until you press Reset or "Forget all of it". The calendar file and the backup file are made on the phone, and go only where you save them.

ಯಾವುದೂ ಈ ತಾಣದ ಸರ್ವರಿಗೆ ಹೋಗುವುದಿಲ್ಲ. "ಈ ಫೋನಿನಲ್ಲೇ ಇಟ್ಟುಕೊಳ್ಳಿ" ಟಿಕ್ ಮಾಡಿದರೆ, ನೀವು "ಎಲ್ಲ ಅಳಿಸಿ" ಅಥವಾ "ಎಲ್ಲವನ್ನೂ ಅಳಿಸಿಹಾಕಿ" ಒತ್ತುವವರೆಗೆ ನಿಮ್ಮ ದಿನಾಂಕ ಮತ್ತು ಫಲಿತಾಂಶಗಳು ಈ ಫೋನಿನಲ್ಲಿ ಮಾತ್ರ ಉಳಿಯುತ್ತವೆ. ಕ್ಯಾಲೆಂಡರ್ ಫೈಲ್ ಮತ್ತು ಬ್ಯಾಕಪ್ ಫೈಲ್ ಫೋನಿನಲ್ಲೇ ತಯಾರಾಗುತ್ತವೆ; ನೀವು ಎಲ್ಲಿ ಉಳಿಸುತ್ತೀರೋ ಅಲ್ಲಿಗೆ ಮಾತ್ರ ಹೋಗುತ್ತವೆ.

Abbreviations: HbA1c (glycated haemoglobin, the three-month glucose test) · BMI (body mass index, weight for height) · B12 (vitamin B12) · UACR (urine albumin to creatinine ratio, a test for protein in the urine) · eGFR (estimated glomerular filtration rate, how well the kidneys filter) · LDL (low-density lipoprotein, the harmful cholesterol) · ECG (electrocardiogram, a tracing of the heartbeat) · mmHg, cm, kg/m², pg/mL, mg/g, mg/dL, mL/min/1.73 m² (the units on your report) ಪದಗಳ ಅರ್ಥ: HbA1c (ಗ್ಲೈಕೇಟೆಡ್ ಹಿಮೋಗ್ಲೋಬಿನ್, ಮೂರು ತಿಂಗಳ ಗ್ಲೂಕೋಸ್ ಪರೀಕ್ಷೆ) · BMI (ಬಾಡಿ ಮಾಸ್ ಇಂಡೆಕ್ಸ್, ಎತ್ತರಕ್ಕೆ ತಕ್ಕ ತೂಕ) · B12 (ವಿಟಮಿನ್ B12) · UACR (ಮೂತ್ರದ ಆಲ್ಬುಮಿನ್-ಕ್ರಿಯೇಟಿನೈನ್ ಅನುಪಾತ, ಮೂತ್ರದಲ್ಲಿ ಪ್ರೋಟೀನ್ ಪರೀಕ್ಷೆ) · eGFR (ಎಸ್ಟಿಮೇಟೆಡ್ ಗ್ಲೋಮೆರುಲಾರ್ ಫಿಲ್ಟ್ರೇಶನ್ ರೇಟ್, ಕಿಡ್ನಿ ಎಷ್ಟು ಸೋಸುತ್ತದೆ) · LDL (ಲೋ-ಡೆನ್ಸಿಟಿ ಲೈಪೋಪ್ರೋಟೀನ್, ಹಾನಿಕಾರಕ ಕೊಲೆಸ್ಟ್ರಾಲ್) · ECG (ಇಲೆಕ್ಟ್ರೋಕಾರ್ಡಿಯೋಗ್ರಾಂ, ಹೃದಯ ಬಡಿತದ ಗೆರೆಚಿತ್ರ) · mmHg, cm, kg/m², pg/mL, mg/g, mg/dL, mL/min/1.73 m² (ನಿಮ್ಮ ವರದಿಯಲ್ಲಿರುವ ಯೂನಿಟ್‌ಗಳು)
Written and maintained by Dr Shashikiran Umakanth.
The English on this page was last checked: 20 October 2026
ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ.
ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 31 October 2026