Skip to the toolನೇರವಾಗಿ ಪರಿಕರಕ್ಕೆ ಹೋಗಿ

Convenience-Induced Disease Risk Estimatorಸೌಲಭ್ಯ-ಪ್ರೇರಿತ ಕಾಯಿಲೆಗಳ ಅಪಾಯದ ಮಾಪಕ

Find out how modern comforts affect your health. ಆಧುನಿಕ ಸೌಕರ್ಯಗಳು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ನೋಡಿ.

Our daily habits have changed a great deal in one generation. We eat more packet food, more sugar and more oil, and we do far less physical work than our parents did. Life has become easier and our health has become harder. 'Lifestyle disease' is the usual name for what follows. 'Convenience-induced disease' is nearer the truth, because it is the comfort itself that does the damage.

ಒಂದೇ ತಲೆಮಾರಿನಲ್ಲಿ ನಮ್ಮ ದಿನನಿತ್ಯದ ಅಭ್ಯಾಸಗಳು ಬಹಳಷ್ಟು ಬದಲಾಗಿವೆ. ನಾವು ತಿನ್ನುವ ಪ್ಯಾಕೆಟ್ ಆಹಾರ, ಸಕ್ಕರೆ ಮತ್ತು ಎಣ್ಣೆ ಹೆಚ್ಚಾಗಿದೆ; ನಮ್ಮ ತಂದೆ-ತಾಯಿಯರಿಗೆ ಹೋಲಿಸಿದರೆ ನಾವು ಮಾಡುವ ದೈಹಿಕ ಶ್ರಮ ತೀರಾ ಕಡಿಮೆಯಾಗಿದೆ. ಬದುಕು ಸುಲಭವಾಗಿದೆ, ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಇದರಿಂದ ಬರುವ ಕಾಯಿಲೆಗಳಿಗೆ ಸಾಮಾನ್ಯವಾಗಿ 'ಜೀವನಶೈಲಿಯ ಕಾಯಿಲೆ' ಎನ್ನುತ್ತಾರೆ. ಆದರೆ 'ಸೌಲಭ್ಯ-ಪ್ರೇರಿತ ಕಾಯಿಲೆ' ಎನ್ನುವುದೇ ಸತ್ಯಕ್ಕೆ ಹೆಚ್ಚು ಹತ್ತಿರ; ಏಕೆಂದರೆ ಇಲ್ಲಿ ಹಾನಿ ಮಾಡುತ್ತಿರುವುದೇ ಆ ಸೌಲಭ್ಯ.

Note: Six of the seven things this tool asks about are in your hands. The one that is not, family history, is here because it changes when you should be checked. Some people get high cholesterol or diabetes even with good habits, because it runs in the family. This page is written for adults. Enter an age between 18 and 110, or leave it blank. ಗಮನಿಸಿ: ಈ ಮಾಪಕ ಕೇಳುವ ಏಳು ವಿಷಯಗಳಲ್ಲಿ ಆರು ನಿಮ್ಮ ಕೈಯಲ್ಲೇ ಇವೆ. ನಿಮ್ಮ ಕೈಯಲ್ಲಿಲ್ಲದ ಒಂದು ವಿಷಯ ಕೌಟುಂಬಿಕ ಹಿನ್ನೆಲೆ (ಫ್ಯಾಮಿಲಿ ಹಿಸ್ಟರಿ). ನೀವು ಯಾವಾಗ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬುದನ್ನು ಅದು ಬದಲಾಯಿಸುತ್ತದೆ, ಹಾಗಾಗಿ ಅದನ್ನೂ ಇಲ್ಲಿ ಕೇಳುತ್ತಿದ್ದೇವೆ. ಒಳ್ಳೆಯ ಅಭ್ಯಾಸಗಳಿದ್ದರೂ ಕೆಲವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಬಹುದು ಅಥವಾ ಮಧುಮೇಹ ಬರಬಹುದು, ಏಕೆಂದರೆ ಅದು ಅವರ ಕುಟುಂಬದಲ್ಲಿ ನಡೆದುಬಂದಿರುತ್ತದೆ. ಈ ಪುಟ ದೊಡ್ಡವರಿಗಾಗಿ ಬರೆದದ್ದು. 18ರಿಂದ 110ರ ನಡುವಿನ ವಯಸ್ಸನ್ನು ಹಾಕಿ, ಅಥವಾ ಖಾಲಿ ಬಿಡಿ.

About you ನಿಮ್ಮ ಬಗ್ಗೆ

These two are optional. They help us suggest the right health checks for your age. Nothing you enter is sent anywhere. Your answers stay in this browser tab so a reload does not lose them, and they are gone when you close it. ಈ ಎರಡನ್ನೂ ಹಾಕಲೇಬೇಕು ಎಂದಿಲ್ಲ. ನಿಮ್ಮ ವಯಸ್ಸಿಗೆ ತಕ್ಕ ತಪಾಸಣೆಗಳನ್ನು ಹೇಳಲು ಇವು ನಮಗೆ ನೆರವಾಗುತ್ತವೆ. ನೀವು ಹಾಕುವ ಯಾವ ಮಾಹಿತಿಯೂ ಎಲ್ಲಿಗೂ ಹೋಗುವುದಿಲ್ಲ. ಪುಟ ಮತ್ತೆ ಲೋಡ್ ಆದಾಗ ನಿಮ್ಮ ಉತ್ತರಗಳು ಕಳೆದುಹೋಗದಂತೆ ಈ ಬ್ರೌಸರ್ ಟ್ಯಾಬ್‌ನಲ್ಲೇ ಉಳಿಯುತ್ತವೆ; ಟ್ಯಾಬ್ ಮುಚ್ಚಿದ ಕೂಡಲೇ ಅವೆಲ್ಲವೂ ಅಳಿಸಿಹೋಗುತ್ತವೆ.

This page is written for adults. Enter an age between 18 and 110, or leave it blank. ಈ ಪುಟ ದೊಡ್ಡವರಿಗಾಗಿ ಬರೆದದ್ದು. 18ರಿಂದ 110ರ ನಡುವಿನ ವಯಸ್ಸನ್ನು ಹಾಕಿ, ಅಥವಾ ಖಾಲಿ ಬಿಡಿ.

1. Daily Physical Activity 1. ದಿನನಿತ್ಯದ ದೈಹಿಕ ಚಟುವಟಿಕೆ

2. Food Choices 2. ನಿಮ್ಮ ಆಹಾರ ಪದ್ಧತಿ

3. Sitting Without a Break 3. ವಿರಾಮವಿಲ್ಲದೆ ಕುಳಿತುಕೊಳ್ಳುವುದು

Think about a normal working day. We are asking how long you sit at a stretch, not how many hours in total. ಸಾಮಾನ್ಯ ಕೆಲಸದ ದಿನವನ್ನು ನೆನಪಿಸಿಕೊಳ್ಳಿ. ನೀವು ಒಟ್ಟು ಎಷ್ಟು ಗಂಟೆ ಕುಳಿತಿರುತ್ತೀರಿ ಎಂದಲ್ಲ, ಒಂದೇ ಸಮನೆ ಎಷ್ಟು ಹೊತ್ತು ಕುಳಿತಿರುತ್ತೀರಿ ಎಂದು ನಾವು ಕೇಳುತ್ತಿದ್ದೇವೆ.

4. Sleep Quality 4. ನಿದ್ದೆಯ ಗುಣಮಟ್ಟ

On a normal night, counting from when you fall asleep to when you wake. Choose the second option if your bed time or waking time moves by more than about an hour from day to day. That holds even when the total is enough. ಸಾಮಾನ್ಯವಾಗಿ ಒಂದು ರಾತ್ರಿ, ನಿದ್ದೆ ಹತ್ತಿದಾಗಿನಿಂದ ಎಚ್ಚರವಾಗುವವರೆಗೆ ಲೆಕ್ಕ ಹಾಕಿ. ದಿನದಿಂದ ದಿನಕ್ಕೆ ನೀವು ಮಲಗುವ ಅಥವಾ ಏಳುವ ಸಮಯ ಸುಮಾರು ಒಂದು ಗಂಟೆಗಿಂತ ಹೆಚ್ಚು ವ್ಯತ್ಯಾಸವಾಗುತ್ತಿದ್ದರೆ, ಎರಡನೆಯ ಆಯ್ಕೆಯನ್ನು ಆರಿಸಿ. ಒಟ್ಟು ನಿದ್ದೆ ಸಾಕಷ್ಟಿದ್ದರೂ ಅದನ್ನೇ ಆರಿಸಿ.

5. Family History of Diabetes or Heart Disease 5. ಮಧುಮೇಹ ಅಥವಾ ಹೃದಯ ಕಾಯಿಲೆಯ ಕೌಟುಂಬಿಕ ಹಿನ್ನೆಲೆ (ಫ್ಯಾಮಿಲಿ ಹಿಸ್ಟರಿ)

A parent, brother or sister with diabetes, high blood pressure, or a heart attack or stroke. Answer Yes if any of them has one of these. This page gives it one point either way: it does not score it higher if it started before the age of 60. That age does matter, so tell your doctor when it started and let them decide. Uncles, aunts and grandparents do not count here. ತಂದೆ, ತಾಯಿ, ಅಣ್ಣ-ತಮ್ಮ ಅಥವಾ ಅಕ್ಕ-ತಂಗಿಯರಲ್ಲಿ ಯಾರಿಗಾದರೂ ಮಧುಮೇಹ (ಶುಗರ್), ಅಧಿಕ ರಕ್ತದೊತ್ತಡ (BP), ಹೃದಯಾಘಾತ ಅಥವಾ ಪಾರ್ಶ್ವವಾಯು (ಸ್ಟ್ರೋಕ್) ಇದ್ದರೆ 'ಇದೆ' ಎನ್ನಿ. ಈ ಪುಟ ಇದಕ್ಕೆ ಯಾವಾಗಲೂ ಒಂದೇ ಅಂಕ ಕೊಡುತ್ತದೆ: 60 ವರ್ಷ ತುಂಬುವ ಮೊದಲೇ ಶುರುವಾಗಿದ್ದರೂ ಹೆಚ್ಚು ಅಂಕ ಕೊಡುವುದಿಲ್ಲ. ಆದರೆ ಆ ವಯಸ್ಸು ಮುಖ್ಯವೇ. ಹಾಗಾಗಿ ಕಾಯಿಲೆ ಯಾವಾಗ ಶುರುವಾಯಿತು ಎಂದು ನಿಮ್ಮ ವೈದ್ಯರಿಗೆ ತಿಳಿಸಿ, ಮುಂದಿನ ನಿರ್ಧಾರವನ್ನು ಅವರಿಗೇ ಬಿಡಿ. ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಮತ್ತು ಅಜ್ಜ-ಅಜ್ಜಿಯರು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

6. Tobacco, in Any Form 6. ಯಾವುದೇ ರೂಪದ ತಂಬಾಕು

Cigarettes, beedis, gutka, khaini, pan masala with tobacco, snuff, or any chewed tobacco. Chewed tobacco counts exactly the same here as smoked. Any answer other than the first one sets your result to High. That holds whatever the other six answers say. There is no safe amount. ಸಿಗರೇಟ್, ಬೀಡಿ, ಗುಟ್ಕಾ, ಖೈನಿ, ತಂಬಾಕು ಇರುವ ಪಾನ್ ಮಸಾಲಾ, ನಶ್ಯ ಅಥವಾ ಜಗಿಯುವ ಯಾವುದೇ ತಂಬಾಕು. ಇಲ್ಲಿ ಜಗಿಯುವ ತಂಬಾಕಿಗೂ ಸೇದುವ ತಂಬಾಕಿನಷ್ಟೇ ಲೆಕ್ಕ. ಮೊದಲನೆಯದನ್ನು ಬಿಟ್ಟು ಬೇರೆ ಯಾವ ಉತ್ತರ ಆರಿಸಿದರೂ ನಿಮ್ಮ ಫಲಿತಾಂಶ 'ಹೆಚ್ಚಿನ ಅಪಾಯ' ಎಂದೇ ಬರುತ್ತದೆ. ಉಳಿದ ಆರು ಉತ್ತರಗಳು ಏನೇ ಆಗಿದ್ದರೂ ಇದು ಬದಲಾಗುವುದಿಲ್ಲ. ತಂಬಾಕಿನಲ್ಲಿ ಸುರಕ್ಷಿತ ಪ್ರಮಾಣ ಎಂಬುದೇ ಇಲ್ಲ.

7. Alcohol 7. ಮದ್ಯ

Beer, wine, arrack, toddy and spirits all count the same here. We are asking how often, not how much. Nobody sees this answer. ಬಿಯರ್, ವೈನ್, ಸಾರಾಯಿ, ಕಳ್ಳು ಅಥವಾ ಹಾರ್ಡ್ ಡ್ರಿಂಕ್ಸ್: ಇಲ್ಲಿ ಎಲ್ಲವೂ ಒಂದೇ ಲೆಕ್ಕಕ್ಕೆ ಬರುತ್ತವೆ. ನೀವು ಎಷ್ಟು ಕುಡಿಯುತ್ತೀರಿ ಎಂಬುದಲ್ಲ, ಎಷ್ಟು ಸಲ ಕುಡಿಯುತ್ತೀರಿ ಎಂಬುದಷ್ಟೇ ನಮ್ಮ ಪ್ರಶ್ನೆ. ಈ ಉತ್ತರವನ್ನು ಯಾರೂ ನೋಡುವುದಿಲ್ಲ.

This is not a medical test ಇದೊಂದು ವೈದ್ಯಕೀಯ ಪರೀಕ್ಷೆಯಲ್ಲ

This score is our own. It is not a published medical test. It has not been checked against what actually happens to people over the years, and no doctor or medical body has approved it. It is an orderly way of looking at seven everyday habits, nothing more. Treat it as something to start a conversation with, not as a finding.

ಈ ಅಂಕಗಳನ್ನು ನಾವೇ ರೂಪಿಸಿದ್ದು. ಇದೊಂದು ಪ್ರಕಟವಾದ ವೈದ್ಯಕೀಯ ಪರೀಕ್ಷೆಯಲ್ಲ. ವರ್ಷಗಳ ಕಾಲ ಜನರಿಗೆ ನಿಜವಾಗಿ ಏನಾಗುತ್ತದೆ ಎಂಬುದರ ಜೊತೆ ಇದನ್ನು ಯಾರೂ ತಾಳೆ ನೋಡಿಲ್ಲ, ಮತ್ತು ಯಾವ ವೈದ್ಯರೂ ಅಥವಾ ವೈದ್ಯಕೀಯ ಸಂಸ್ಥೆಯೂ ಇದಕ್ಕೆ ಒಪ್ಪಿಗೆ ನೀಡಿಲ್ಲ. ದಿನನಿತ್ಯದ ಏಳು ಅಭ್ಯಾಸಗಳನ್ನು ಕ್ರಮಬದ್ಧವಾಗಿ ನೋಡುವ ಒಂದು ದಾರಿ, ಅಷ್ಟೇ. ವೈದ್ಯರೊಡನೆ ಮಾತುಕತೆ ಶುರುಮಾಡಲು ಇದನ್ನೊಂದು ನೆಪವಾಗಿ ತೆಗೆದುಕೊಳ್ಳಿ, ಪರೀಕ್ಷೆಯ ವರದಿಯಾಗಿ ಅಲ್ಲ.

How the score is worked out ಅಂಕಗಳನ್ನು ಹೇಗೆ ಲೆಕ್ಕ ಹಾಕುತ್ತೇವೆ?

Seven questions. Five of them add nothing, one or two points: activity, food, sitting, tobacco and alcohol. Two of them add nothing or one point only, because each has just two answers: sleep and family history. The points are added up, and the highest total possible is 12. A total of 3 or less is Low, 4 to 7 is Moderate, and 8 or more is High.

One habit overrides the total. If you answer anything but the first option to the tobacco question, the result is High. That holds whatever the other six answers say. We have not hidden that in the arithmetic. There is no safe amount of tobacco in any form, and a low total would be a false comfort.

Nothing else is weighted. That is a deliberate choice, and it is also an admission: we do not know the true weights of the other six. Inventing them would make the score look more exact than it is.

ಇಲ್ಲಿ ಒಟ್ಟು ಏಳು ಪ್ರಶ್ನೆಗಳಿವೆ. ಅವುಗಳಲ್ಲಿ ಐದು ಪ್ರಶ್ನೆಗಳು ಸೊನ್ನೆ, ಒಂದು ಅಥವಾ ಎರಡು ಅಂಕಗಳನ್ನು ಕೊಡುತ್ತವೆ: ಓಡಾಟ, ಆಹಾರ, ಸತತವಾಗಿ ಕುಳಿತಿರುವುದು, ತಂಬಾಕು ಮತ್ತು ಮದ್ಯ. ಉಳಿದ ಎರಡಕ್ಕೆ ಇರುವುದೇ ಎರಡು ಆಯ್ಕೆಗಳು, ಹಾಗಾಗಿ ಅವು ಸೊನ್ನೆ ಅಥವಾ ಒಂದು ಅಂಕವನ್ನು ಮಾತ್ರ ಕೊಡುತ್ತವೆ: ನಿದ್ದೆ ಮತ್ತು ಕೌಟುಂಬಿಕ ಹಿನ್ನೆಲೆ. ಈ ಎಲ್ಲ ಅಂಕಗಳನ್ನು ಕೂಡಿಸಿದಾಗ ಗರಿಷ್ಠ ಮೊತ್ತ 12. ಒಟ್ಟು 3 ಅಥವಾ ಅದಕ್ಕಿಂತ ಕಡಿಮೆ ಇದ್ದರೆ 'ಕಡಿಮೆ ಅಪಾಯ', 4ರಿಂದ 7 ಇದ್ದರೆ 'ಮಧ್ಯಮ ಅಪಾಯ', 8 ಅಥವಾ ಅದಕ್ಕಿಂತ ಹೆಚ್ಚಿದ್ದರೆ 'ಹೆಚ್ಚಿನ ಅಪಾಯ' ಎನ್ನುತ್ತೇವೆ.

ಒಂದು ಅಭ್ಯಾಸ ಮಾತ್ರ ಈ ಒಟ್ಟು ಮೊತ್ತವನ್ನೇ ಮೀರಿ ನಿಲ್ಲುತ್ತದೆ. ತಂಬಾಕಿನ ಪ್ರಶ್ನೆಗೆ ಮೊದಲನೆಯದನ್ನು ಬಿಟ್ಟು ಬೇರೆ ಯಾವ ಉತ್ತರ ಆರಿಸಿದರೂ, ಉಳಿದ ಆರು ಉತ್ತರಗಳು ಎಷ್ಟೇ ಚೆನ್ನಾಗಿದ್ದರೂ, ಫಲಿತಾಂಶ 'ಹೆಚ್ಚಿನ ಅಪಾಯ' ಎಂದೇ ಬರುತ್ತದೆ. ಇದನ್ನು ನಾವೇನೂ ಲೆಕ್ಕದೊಳಗೆ ಬಚ್ಚಿಟ್ಟಿಲ್ಲ. ಏಕೆಂದರೆ, ಯಾವ ರೂಪದ ತಂಬಾಕಿಗೂ ಸುರಕ್ಷಿತ ಪ್ರಮಾಣ ಎಂಬುದೇ ಇಲ್ಲ; ತಂಬಾಕು ಬಳಸುತ್ತಾ ಕಡಿಮೆ ಅಂಕ ಬಂದರೆ ಅದು ನಿಮಗೆ ಕೊಡುವ ಸುಳ್ಳು ಸಮಾಧಾನವಷ್ಟೇ.

ಉಳಿದ ಯಾವುದಕ್ಕೂ ನಾವು ಹೆಚ್ಚು-ಕಡಿಮೆ ತೂಕ ಕೊಟ್ಟಿಲ್ಲ. ಇದು ನಾವು ಬೇಕೆಂದೇ ಮಾಡಿದ ಆಯ್ಕೆ; ಜೊತೆಗೆ ನಾವು ಒಪ್ಪಿಕೊಳ್ಳುವ ಮಾತೂ ಹೌದು: ಆ ಆರು ಅಭ್ಯಾಸಗಳ ನಿಜವಾದ ತೂಕ ಎಷ್ಟೆಂಬುದು ನಮಗೆ ಗೊತ್ತಿಲ್ಲ. ಗೊತ್ತಿಲ್ಲದ ತೂಕವನ್ನು ನಾವೇ ಕಲ್ಪಿಸಿ ಹಾಕಿದರೆ, ಈ ಅಂಕ ಇರುವುದಕ್ಕಿಂತ ಹೆಚ್ಚು ನಿಖರವಾಗಿ ಕಾಣುತ್ತದೆ.

Why these seven ಈ ಏಳೇ ವಿಷಯಗಳು ಏಕೆ?

Movement, food from outside the home, long unbroken sitting, sleep, family history, tobacco and alcohol. Each one you can answer by counting rather than by judging yourself. Each one a doctor would ask about anyway. Family history is the one you cannot change. It does not make the other six count for more in this arithmetic. We should not have said in the past that it did. It is here because it changes what you should do about them. It brings your first blood pressure and blood sugar check forward, rather than asking you to try harder.

ಓಡಾಟ, ಹೊರಗಿನ ಊಟ, ಸತತವಾಗಿ ಕುಳಿತಿರುವುದು, ನಿದ್ದೆ, ಕೌಟುಂಬಿಕ ಹಿನ್ನೆಲೆ, ತಂಬಾಕು ಮತ್ತು ಮದ್ಯ. ಇವುಗಳಿಗೆ ನಿಮ್ಮ ಬಗ್ಗೆ ನೀವೇ ತೀರ್ಪು ಕೊಟ್ಟುಕೊಳ್ಳುವ ಬದಲು, ಸುಮ್ಮನೆ ಲೆಕ್ಕ ಹಾಕಿ ಉತ್ತರಿಸಬಹುದು. ವೈದ್ಯರೂ ನಿಮ್ಮನ್ನು ಇವುಗಳನ್ನೇ ಕೇಳುತ್ತಾರೆ. ಇದರಲ್ಲಿ ಬದಲಾಯಿಸಲಾಗದ್ದು ಕೌಟುಂಬಿಕ ಹಿನ್ನೆಲೆ ಒಂದೇ. ಈ ಲೆಕ್ಕದಲ್ಲಿ ಅದು ಉಳಿದ ಆರರ ತೂಕವನ್ನು ಹೆಚ್ಚಿಸುವುದಿಲ್ಲ; ಹಿಂದೆ ನಾವು ಹಾಗೆ ಹೇಳಿದ್ದು ತಪ್ಪು. ಆ ಆರರ ಬಗ್ಗೆ ನೀವು ಏನು ಮಾಡಬೇಕು ಎಂಬುದನ್ನು ಅದು ಬದಲಾಯಿಸುತ್ತದೆ, ಅದಕ್ಕಾಗಿಯೇ ಅದು ಇಲ್ಲಿದೆ. ಇನ್ನಷ್ಟು ಕಷ್ಟಪಡಿ ಎಂದು ಕೇಳುವ ಬದಲು, ನಿಮ್ಮ ಮೊದಲ BP ಮತ್ತು ಶುಗರ್ ಪರೀಕ್ಷೆಯನ್ನು ಬೇಗ ಮಾಡಿಸಿಕೊಳ್ಳುವಂತೆ ಇದು ಸೂಚಿಸುತ್ತದೆ.

What to do with the result ಈ ಫಲಿತಾಂಶವನ್ನು ಇಟ್ಟುಕೊಂಡು ಮುಂದೇನು ಮಾಡಬೇಕು?

Read the advice for each habit rather than the total. The total tells you very little. The seven separate verdicts tell you where to start. Change one thing, not seven. Does it run in your family? Are you already on treatment for blood pressure, sugar or cholesterol? If so, take this to your doctor rather than acting on it alone.

ಒಟ್ಟು ಅಂಕಗಳಿಗಿಂತ, ಪ್ರತಿಯೊಂದು ಅಭ್ಯಾಸಕ್ಕೂ ಕೊಟ್ಟಿರುವ ಸಲಹೆಯನ್ನು ಓದಿ. ಒಟ್ಟು ಮೊತ್ತ ನಿಮಗೆ ಹೇಳುವುದು ಬಹಳ ಕಡಿಮೆ. ಬದಲಾವಣೆ ಎಲ್ಲಿಂದ ಶುರು ಮಾಡಬೇಕು ಎಂಬುದನ್ನು ಆ ಏಳು ಪ್ರತ್ಯೇಕ ತೀರ್ಮಾನಗಳು ಹೇಳುತ್ತವೆ. ಒಂದನ್ನಷ್ಟೇ ಬದಲಾಯಿಸಿ, ಏಳನ್ನೂ ಒಟ್ಟಿಗಲ್ಲ. ಇದು ನಿಮ್ಮ ಕುಟುಂಬದಲ್ಲಿ ನಡೆದುಬಂದಿದೆಯೇ? ರಕ್ತದೊತ್ತಡ, ಶುಗರ್ ಅಥವಾ ಕೊಲೆಸ್ಟ್ರಾಲ್‌ಗೆ ನೀವು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದೀರಾ? ಹಾಗಿದ್ದರೆ, ನೀವಷ್ಟೇ ನಿರ್ಧಾರ ತೆಗೆದುಕೊಳ್ಳದೆ ಇದನ್ನು ನಿಮ್ಮ ವೈದ್ಯರಿಗೆ ತೋರಿಸಿ.

Abbreviations: BMI (Body Mass Index) · BP (Blood Pressure) · NCD (Non-Communicable Disease). An NCD is a long-term illness that does not spread from person to person. Diabetes and heart disease are two of them. ಪದಗಳ ಅರ್ಥ: BMI (ಬಾಡಿ ಮಾಸ್ ಇಂಡೆಕ್ಸ್) · BP (ರಕ್ತದೊತ್ತಡ) · NCD (ಸಾಂಕ್ರಾಮಿಕವಲ್ಲದ ಕಾಯಿಲೆ). NCD ಎಂದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡದ, ದೀರ್ಘಕಾಲ ಕಾಡುವ ಕಾಯಿಲೆ. ಮಧುಮೇಹ ಮತ್ತು ಹೃದಯ ಕಾಯಿಲೆ ಅಂಥವುಗಳಲ್ಲಿ ಎರಡು.
Written and maintained by Dr Shashikiran Umakanth.
The English on this page was last checked: 5 September 2026
ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ.
ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 31 October 2026